Menu
News Details

ತುಳುಕೂಟ ಕುವೈಟ್ ನ ಗೌರವಾನ್ವಿತ ಅಧ್ಯಕ್ಷರಾದ ಶ್ರೀ ರಮೇಶ್ ಎಸ್ ಭಂಡಾರಿ ಇವರು ಡೈಜಿ ವರ್ಲ್ಡ್ ವಾಹಿನಿಯ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ತುಳು ಸಾಹಿತ್ಯ ಅಕಾಡೆಮಿ ಯ ಗೌರವಾನ್ವಿತ ಅಧ್ಯಕ್ಷರಾದ ಶ್ರೀಯುತ ದಯಾನಂದ್ ಕತ್ತಲ್ಸರ್ ಜೊತೆಗೆ ಪ್ರಸ್ತುತ ಕೋವಿಡ್-೧೯ ಮಹಾಮಾರಿಯ ಪರಿಣಾಮಗಳ ಬಗ್ಗೆ ದೂರವಾಣಿ ಮೂಲಕ ಮಾತನಾಡಿದರು.

ಈ ಸಂದರ್ಭದಲ್ಲಿ ಶ್ರೀಯುತ ದಯಾನಂದ್ ಕತ್ತಲ್ಸರ್ ಕುವೈಟ್ ಗೆ ಸ್ವಾಗತಿಸಿ ತಮಗೆ ಗೌರವ ಸಲ್ಲಿಸಿದ ಕ್ಷಣವನ್ನು ನೆನೆದು ಧನ್ಯವಾದ ಹೇಳಿದರು ಹಾಗೆ ತುಳುನಾಡ ಸಂಸ್ಕೃತಿ ,ಆಚರಣೆಗಳಾದಂತ ನಾಗಾರಾಧನೆ, ದೈವಾರಾಧನೆ ಯ ಕಾರ್ಯಗಳನ್ನು ಮಾಡುವಲ್ಲಿ ತುಳುನಾಡ ಅಭಿವೃದ್ಧಿಯಲ್ಲಿ ಅನಿವಾಸಿ ತುಳುವರ ಕೊಡುಗೆ ಅಪಾರವಾದದ್ದು ಎಂದು ಶ್ಲಾಘಿಸಿದರು ಮತ್ತು ಈ ಪ್ರಸ್ತುತ ಪರಿಸ್ಥಿತಿಯಲ್ಲಿ ದೈವಾರಾಧನೆ ಕಾರ್ಯಕ್ರಮಗಳು ಸ್ಥಗಿತಗೊಂಡಿದ್ದು ಈ ಕಾರ್ಯಗಳನ್ನು ಮಾಡುವವರು ಅವರ ಕುಟುಂಬದವರು ಕೆಲವರು ಸಮಸ್ಯೆಗಳನ್ನು ಎದಿರುಸಿತ್ತಿದ್ದು ಅವರ ಕುಟುಂಬಗಳಿಗೆ ಆ ಕ್ಷೇತ್ರದಲ್ಲಿರುವವರಿಗೆ ಸಾದ್ಯವಾದ ಮಟ್ಟಿಗೆ ಸಹಾಯಮಾಡಬೇಕಾಗಿ ವಿನಂತಿಸಿದರು.

ಶ್ರೀ ಕತ್ತಲ್ಸರ್ ಅವರ ಮನವಿಗೆ ಪ್ರತಿಕ್ರಯಿಸಿದ ಶ್ರೀ ರಮೇಶ್ ಭಂಡಾರಿ ಇವರು ಖಂಡಿತವಾಗಿಯೂ ಆ ಕುಟುಂಬಗಳ ಸಮಸ್ಯೆಗಳಿಗೆ ಸ್ಪಂದಿಸಿ ಸಹಕಾರ ಮಾಡುವ ಭರವಸೆ ನೀಡಿದರು । ಮತ್ತು ಕುವೈಟ್ ಇಂದ ಮಂಗಳೂರು ಮತ್ತು ಬೆಂಗಳೂರಿಗೆ ವಿಮಾನಯಾನ ವ್ಯವಸ್ಥೆಗೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಿ ಸ್ ಯಡಿಯೂರಪ್ಪ ನವರ ಜೊತೆಯಲ್ಲಿ ಮಾತನಾಡಿದ್ದು ತುಳು ಸಾಹಿತ್ಯ ಅಕಾಡೆಮಿ ಯ ಗೌರವಾನ್ವಿತ ಅಧ್ಯಕ್ಷರಾದ ನೀವು ಮತ್ತು ಡೈಜಿ ವಾಹಿನಿಯು ಇದಕ್ಕೆ ಸಂಬಂಧಪಟ್ಟ ಸ್ಥಳೀಯ ಆಡಳಿತ ಅಧಿಕಾರಿಗಳೊಡನೆ ಮಾತನಾಡಿ ಆದಷ್ಟು ಬೇಗ ವಿಮಾನಯಾನ ವ್ಯವಸ್ಥೆ ಮಾಡುವಲ್ಲಿ ಸಹಕಾರ ನೀಡಬೇಕಾಗಿ ಕೇಳಿಕೊಂಡರು.

Youtube Link